ಬೆಕ್ಕಿನ ಉತ್ತರ -Prabhakar Hegde

ಬಿಳಿ ಬಿಳಿ ಬೆಕ್ಕೇ
ಬೇಗನೆ ಬಾರೇ
ಹಚ್ಚುವೆ ನಿನಗೆ ಬಣ್ಣ
ಹಳದೀ ಕಪ್ಪಿನ
ಪಟ್ಟೆಯನೆಳೆದರೆ
ನೀ ಥೇಟ್ ಕಾಡಿನ ಹುಲಿಯಪ್ಪ !

ಹೋಗೋ ಬೆಪ್ಪಾ
ತಿರುಗಲು ತಿಪ್ಪಾ
ನೀ ಹಚ್ಚಲು ಬಣ್ಣಾ
ನಾನಾಗೆನು ಕಾಡಿನ ಹುಲಿಯಪ್ಪ
ಬದಲಿಗೆ ನಿನ್ನಯ
ಮೈಗೇ ಬಳಿದರೆ
ನೀನಾಗುವೆ ಬೀದಿಯ ಬೆರ್ಚಪ್ಪ !

-ಪ್ರಭಾಕರ ಹೆಗಡೆ

(ಮಕ್ಕಳ ಪದ್ಯ )
8/19/2012 18:43:51

Submitted by: Prabhakar Hegde
Submitted on: Sun Jan 01 2023 11:54:11 GMT+0530 (India Standard Time)
Category: Poem
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Poem, ಕನ್ನಡ/Kannada, This is Mine. / Original]

ಕಾಮೆಂಟ್‌ಗಳು