ಶಿಶು ಪ್ರಾಸಗಳು -Prabhakar Ishwar Hegde

-1-
ಪುಸ್ತಕದಲ್ಲಿ ಎಲೆಯನು ಇಟ್ಟರೆ
ಆಗುವುದೇನಕ್ಕಾ
ನವಿಲಿನ ಬಣ್ಣದ ಪುಕ್ಕಾ ?

-2-
ತಿನ್ನಲು ಕಾಶಿ
ದೋಸೆಯ ರಾಶಿ
ಆಯಿತು ಹೊಟ್ಟೆ
ಹಲಸಿನ ಕೊಟ್ಟೆ !

-3-
ಭಟ್ಟನು ಬಿಟ್ಟ ಜುಟ್ಟ
ಕಟ್ಟದೆ ಹಾಗೇ ಬಿಟ್ಟ
ಹೆ೦ಡತಿ ಮಾಡಲು ಸಿಟ್ಟ
ಭಟ್ಟನು ಕಟ್ಟಿದ ಜುಟ್ಟ

-4-
ಅಜ್ಜನ ಬಾಯಲಿ ಹಲ್ಲೇ ಇಲ್ಲ
ತಿನ್ನಲು ಆಗದು ಕಾಯಿಬೆಲ್ಲ !

-5-
ಇಳಿದರೆ ನೀರಿಗೆ ನಾನು
ಆಡಲು ಬರುವುದೆ ಮೀನು ?

-6-
ಭಟ್ಟನ ಜುಟ್ಟ
ಕೋಳಿಯ ಪುಕ್ಕ
ಹೆ೦ಡತಿ ಕೈಗೂ
ಸಿಕ್ಕದ ಲೆಕ್ಕ !

-7-
ದೋಸೆ ಮೆದ್ದ ಸಿದ್ದ
ಮೀಸೆ ತಿರುವಿ ಎದ್ದ

ಪ್ರಭಾಕರ ಹೆಗಡೆ
-2012
Submitted by: Prabhakar Ishwar Hegde
Submitted on: Wed Jan 25 2023 21:52:36 GMT+0530 (India Standard Time)
Category: Poem
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Poem, ಕನ್ನಡ/Kannada, This is Mine. / Original]

ಕಾಮೆಂಟ್‌ಗಳು